Posts

Showing posts from November, 2019

ಸಮಕ್ಷಮ - ಸಂಚಿಕೆ 4, ಮುದ್ದಣ - ಕನ್ನಡ ನವೋದಯ ಸಾಹಿತ್ಯದ ಮುಂಜಾನೆಯ ಕೋಳಿ!

Image
ಸಮಕ್ಷಮ, ಸಂಚಿಕೆ - 4 ಕಳೆದ ಶತಮಾನದ 50-60ರ ದಶಕದ ವಿದ್ಯಾರ್ಥಿಗಳಿಗೆ ಪರಿಚಯವಿರುವ ಮುದ್ದಣ-ಮನೋರಮೆಯರ ಸಂವಾದ ನೆನಪಿದ್ದೀತು. ಅದು ತಿಳಿಯದವರಿಗೆ ಇಲ್ಲಿದೆ ಮಾಹಿತಿ, ಪರಿಚಯ. ನವೋದಯ ಸಾಹಿತ್ಯದ ಮುಂಜಾನೆಯ ಕೋಳಿ ಎಂದು ಪ್ರೀತಿಯಿಂದ ಕರೆಯಲ್ಪಟ್ಟ ನಂದಳಿಕೆ ಲಕ್ಷ್ಮೀನಾರಾಯಣರ ಬದುಕು-ಬರಹದ ವಿವರಗಳು ಇಲ್ಲಿವೆ. ಅವರ ಹಸ್ತಾಕ್ಷರವೂ ಕಾಣುವಂತಿದೆ.

ಸಮಕ್ಷಮ - ಸಂಚಿಕೆ - 3, ಗಳಗನಾಥರು

Image

ಸಮಕ್ಷಮ - ಸಂಚಿಕೆ - 1 ರೊದ್ದ ಶ್ರೀನಿವಾಸರಾಯರು

Image
ಸಮಕ್ಷಮ ಇದು ನಾಡಿನ ಪ್ರಸಿದ್ಧ ವಾರಪತ್ರಿಕೆ “ಸುಧಾ” ಕಾಲು ಶತಮಾನದ ಹಿಂದೆ ಪ್ರಕಟಿಸಿದ ಸಾಹಿತ್ಯಮಾಲೆ. ಇದನ್ನು ನನ್ನ ಸಾಹಿತ್ಯಾಸಕ್ತ ಹಿರಿಯ ಮಿತ್ರರಾದ ಶ್ರೀ ನಾ.ವೆ.ಮುರ್ಳಿ ಪ್ರತಿವಾರವೂ ಪ್ರಕಟವಾದ ಲೇಖನಗಳನ್ನು 1995ರ ಸುಮಾರಿನಲ್ಲಿ ಸಂಗ್ರಹಿಸಿದರು. ನಾವಿಬ್ಬರೂ ಬೆಂಗಳೂರಿನ ರಕ್ಷಣಾ ಇಲಾಖೆಯ ಪ್ರಯೋಗಾಲಯ ಎಲ್.ಆರ್.ಡಿ.ಇ.ಯ ಉದ್ಯೋಗಿಗಳಾಗಿದ್ದವರು. ಸಮಾನ ಅಭಿರುಚಿಯ ಕಾರಣದಿಂದ ಪತ್ರಿಕೆಯಲ್ಲಿ ಪ್ರಕಟವಾದ ಹಾಳೆಗಳನ್ನು ತುಂಬ ಕಾಲ ರಕ್ಷಿಸಿಡಲಾಗದು. ಆಗಷ್ಟೇ ಬಂದಿದ್ದ ಸ್ಕ್ಯಾನಿಂಗ್ ತಂತ್ರ ಜ್ಞಾನ ಬಳಸಿ ಇವನ್ನು ಸಂರಕ್ಷಿಸಿ ಎಂದು ನನಗೆ ನೀಡಿದರು. ನಾನು ಅವುಗಳನ್ನು ಸ್ಕ್ಯಾನ್ ಮಾಡಿ ಸಂಸ್ಕರಿಸಿ ಒಂದು ಸಂಗ್ರಹವನ್ನು ತಯಾರಿಸಿ ಅದನ್ನು ಸಿಡಿ ರೂಪದಲ್ಲಿ ಅವರಿಗೂ ನೀಡಿದೆ. ಈಗ ಇಪ್ಪತ್ತೈದು ವರ್ಷಗಳ ನಂತರ ಇದನ್ನು ಪ್ರಕಟಿಸುವ ಆಲೋಚನೆ ಬಂದಿತು. ಇದಕ್ಕೆಂದು ಮೂಲ ಪ್ರಕಾಶಕರಾದ ಸುಧಾ ಪತ್ರಿಕೆಗೆ ಈಗೊಂದು ವರ್ಷದ ಹಿಂದೆ ಪತ್ರ ಬರೆದು ಅನುಮತಿಗಾಗಿ ವಿನಂತಿಸಿದ್ದೆ. ಅದಕ್ಕೆ ಮಾರುತ್ತರ ಇದುವರೆಗೂ ಬರಲಿಲ್ಲ. ಕರ್ನಾಟಕ ರಾಜ್ಯೋತ್ಸವದ ಈ ಶುಭಸಂದರ್ಭದಲ್ಲಿ ಪ್ರಕಟಿಸುವುದನ್ನು ಅವರು ಆಕ್ಷೇಪಿಸಲಾರರು ಎಂದು ಭಾವಿಸಿ, ಕೃತಜ್ಞತಾಪೂರ್ವಕವಾಗಿ, ಈಗ ಇದನ್ನು ಇಲ್ಲಿ ವಾರಕ್ಕೆ ಒಂದರಂತೆ ಪ್ರಕಟಿಸುವ ಉದ್ದೇಶವಿದೆ. ಈ ಸಂಚಿಕೆಗಳಲ್ಲಿ ನಮ್ಮ ಎಲ್ಲ ಹಿರಿಯ ಸಾಹಿತಿಗಳ ಸುಂದರ ಚಿತ್ರಗಳು, ಅವರ ಹಸ್ತಾಕ್ಷರ ಹಾಗೂ ವಿವಿರಗಳನ್ನು ಒಳಗೊಂಡಿರುವ ಮಾಹಿತ

ಸಮಕ್ಷಮ - ಸಂಚಿಕೆ-2, ಶಾಂತಕವಿ

Image
ಸಮಕ್ಷಮ   ಇದನ್ನು ದಿನಾಂಕ 1-11-2019, ಈ ವರ್ಷದ ಕರ್ನಾಟಕ ರಾಜ್ಯೋತ್ಸವ ದಿನದಿಂದ ಆರಂಭಿಸಲಾಯಿತು.  ಇದರ ಪ್ರಕಟಣೆಯನ್ನು ನೋಡಿದ ಕೆಲವರು, ಇದನ್ನು ಫೋನ್ ನಲ್ಲಿ ಓದಲು, ಅಕ್ಷರಗಳು ಕಾಣುತ್ತಿಲ್ಲವೆಂದು ತಿಳಿಸಿದ್ದರು. ಈ ಪುಟಗಳು ಸ್ಕ್ಯಾನ್ ಮಾಡಿ ಬಳಸುತ್ತಿರುವುದರಿಂದ, ಫೋನ್ ನಲ್ಲಿ ಹಿಗ್ಗಿಸಿ ನೋಡಿದಾಗ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಹೀಗಾಗಿ ಇದನ್ನು ಬ್ಲಾಗ್ ಮಾಧ್ಯಮದಲ್ಲಿ ಪ್ರಕಟಿಸಲು ಉದ್ದೇಶಿಸಲಾಗಿದೆ. ಈಗ ಫೋನ್ ನಲ್ಲಿಯೂ ಸಹಾ ಚಿತ್ರವನ್ನು ಹಿಗ್ಗಲಿಸಿದರೆ ಸ್ಪಷ್ಟವಾಗಿ ಕಾಣುವಂತಿದೆ. ಬ್ಲಾಗ್ ನಲ್ಲಿ ಪ್ರಕಟವಾಗಿರುವ ಚಿತ್ರದ ಮೇಲೆ ಕ್ಲಿಕ್ ಮಾಡುವುದರ ಮೂಲಕ ಬ್ಲಾಗ್ ನ್ನು ತಲುಪಬಹುದು. ಈ ಬಗ್ಗೆ ಬರೆಯುವ ನಿಮ್ಮ ಅಭಿಪ್ರಾಯವು ಇದರ ಪ್ರಕಟಣೆಗೆ ಸಹಾಯಕವಾಗುವುದು.  ಈ ಸಂಚಿಕೆಯಲ್ಲಿ ಶಾಂತಕವಿಗಳು ಎಂದೇ ಹೆಸರಾಗಿದ್ದ ಸಕ್ಕರಿ ಬಾಳಪ್ಪನವರ ಬಗ್ಗೆ ಮಾಹಿತಿಗಳಿವೆ.