ಸಮಕ್ಷಮ - ಸಂಚಿಕೆ - 1 ರೊದ್ದ ಶ್ರೀನಿವಾಸರಾಯರು


ಸಮಕ್ಷಮ

ಇದು ನಾಡಿನ ಪ್ರಸಿದ್ಧ ವಾರಪತ್ರಿಕೆ “ಸುಧಾ” ಕಾಲು ಶತಮಾನದ ಹಿಂದೆ ಪ್ರಕಟಿಸಿದ ಸಾಹಿತ್ಯಮಾಲೆ. ಇದನ್ನು ನನ್ನ ಸಾಹಿತ್ಯಾಸಕ್ತ ಹಿರಿಯ ಮಿತ್ರರಾದ ಶ್ರೀ ನಾ.ವೆ.ಮುರ್ಳಿ ಪ್ರತಿವಾರವೂ ಪ್ರಕಟವಾದ ಲೇಖನಗಳನ್ನು 1995ರ ಸುಮಾರಿನಲ್ಲಿ ಸಂಗ್ರಹಿಸಿದರು.

ನಾವಿಬ್ಬರೂ ಬೆಂಗಳೂರಿನ ರಕ್ಷಣಾ ಇಲಾಖೆಯ ಪ್ರಯೋಗಾಲಯ ಎಲ್.ಆರ್.ಡಿ.ಇ.ಯ ಉದ್ಯೋಗಿಗಳಾಗಿದ್ದವರು. ಸಮಾನ ಅಭಿರುಚಿಯ ಕಾರಣದಿಂದ ಪತ್ರಿಕೆಯಲ್ಲಿ ಪ್ರಕಟವಾದ ಹಾಳೆಗಳನ್ನು ತುಂಬ ಕಾಲ ರಕ್ಷಿಸಿಡಲಾಗದು. ಆಗಷ್ಟೇ ಬಂದಿದ್ದ ಸ್ಕ್ಯಾನಿಂಗ್ ತಂತ್ರಜ್ಞಾನ ಬಳಸಿ ಇವನ್ನು ಸಂರಕ್ಷಿಸಿ ಎಂದು ನನಗೆ ನೀಡಿದರು.

ನಾನು ಅವುಗಳನ್ನು ಸ್ಕ್ಯಾನ್ ಮಾಡಿ ಸಂಸ್ಕರಿಸಿ ಒಂದು ಸಂಗ್ರಹವನ್ನು ತಯಾರಿಸಿ ಅದನ್ನು ಸಿಡಿ ರೂಪದಲ್ಲಿ ಅವರಿಗೂ ನೀಡಿದೆ. ಈಗ ಇಪ್ಪತ್ತೈದು ವರ್ಷಗಳ ನಂತರ ಇದನ್ನು ಪ್ರಕಟಿಸುವ ಆಲೋಚನೆ ಬಂದಿತು. ಇದಕ್ಕೆಂದು ಮೂಲ ಪ್ರಕಾಶಕರಾದ ಸುಧಾ ಪತ್ರಿಕೆಗೆ ಈಗೊಂದು ವರ್ಷದ ಹಿಂದೆ ಪತ್ರ ಬರೆದು ಅನುಮತಿಗಾಗಿ ವಿನಂತಿಸಿದ್ದೆ. ಅದಕ್ಕೆ ಮಾರುತ್ತರ ಇದುವರೆಗೂ ಬರಲಿಲ್ಲ.

ಕರ್ನಾಟಕ ರಾಜ್ಯೋತ್ಸವದ ಈ ಶುಭಸಂದರ್ಭದಲ್ಲಿ ಪ್ರಕಟಿಸುವುದನ್ನು ಅವರು ಆಕ್ಷೇಪಿಸಲಾರರು ಎಂದು ಭಾವಿಸಿ, ಕೃತಜ್ಞತಾಪೂರ್ವಕವಾಗಿ, ಈಗ ಇದನ್ನು ಇಲ್ಲಿ ವಾರಕ್ಕೆ ಒಂದರಂತೆ ಪ್ರಕಟಿಸುವ ಉದ್ದೇಶವಿದೆ. ಈ ಸಂಚಿಕೆಗಳಲ್ಲಿ ನಮ್ಮ ಎಲ್ಲ ಹಿರಿಯ ಸಾಹಿತಿಗಳ ಸುಂದರ ಚಿತ್ರಗಳು, ಅವರ ಹಸ್ತಾಕ್ಷರ ಹಾಗೂ ವಿವಿರಗಳನ್ನು ಒಳಗೊಂಡಿರುವ ಮಾಹಿತಿಗಳಿವೆ. ಚಿತ್ರ ಕಲಾವಿದರ ಪರಿಚಯವಿದೆ. ಈಗಿನ ತಲೆಮಾರಿಗೆ ಸಾಹಿತ್ಯ, ಕಲೆಗಳ ಕ್ಷೇತ್ರದಲ್ಲಿ ದುಡಿದ ಹಿರಿಯರ ದರ್ಶನವಾಗಲೆಂಬುದು ಆಶಯ.

ಈ ಮಾಲಿಕೆಯನ್ನು ಪ್ರಕಟಿಸಿದ ಸುಧಾ ವಾರ ಪತ್ರಿಕೆಗೆ, ಚಿತ್ರಗಳನ್ನು ಸಂಗ್ರಹಿಸಿ ನೀಡಿದ ಮಿತ್ರರಾದ ಶ್ರೀ ನಾ.ವೆ. ಮುರ್ಳಿಯವರಿಗೆ ಕೃತಜ್ಞತೆಗಳು.



Comments