ಸಮಕ್ಷಮ - ಲೇಖನ 6, ನವರತ್ನ ರಾಮರಾಯರು

ಅಧಿಕಾರ ಮತ್ತು ಸಾಹಿತ್ಯಗಳು ವಿಚಿತ್ರ ಜೋಡಿ ಎನ್ನಿಸುವಂಥ ವಾತಾವರಣ ಇಂದು ಕಾಣುತ್ತದೆ. ಅಧಿಕಾರವು ಮಾನವೀಯತೆಯನ್ನು ಮೆರೆಸಲು, ಜನರಿಗೆ ಅನುಕೂಲ ಮಾಡಿಕೊಡಲು ಬಳಸಿದಾಗ ಅದರ ಸಾರ್ಥಕತೆ ಎದ್ದು ಕಾಣುವಂತೆ ಇರುತ್ತದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಕೂಡ ಉನ್ನತ ಹುದ್ದೆಯಲ್ಲಿದ್ದು, ಸಾಹಿತ್ಯವನ್ನು ಜೀವನ ಮೌಲ್ಯ ಎಂಬಂತೆ ಪೋಷಿಸಿಕೊಂಡು ಬಂದರು. ಅದೇ ಸರಣಿಯಲ್ಲಿ ಕನ್ನಡದಲ್ಲಿ ನಾವು ಕಾಣುವ ಮತ್ತೊಂದು ಹೆಸರು ನವರತ್ನ ರಾಮರಾಯರದು. ತಾವು ಬರೆಯುವುದಕ್ಕಿಂತ ಇತರರ ಬರಹವನ್ನು ಮೆಚ್ಚುತ್ತಿದ್ದುದೇ ಹೆಚ್ಚು. ಮಾಸ್ತಿಯವರ ಒತ್ತಾಸೆಗೆ ಅನೇಕ ಬರಹಗಳನ್ನು ನವರತ್ನರಾಮರಾಯರು ಬರೆದರು. ಕೆಲವು ನೆನಪುಗಳು ಎನ್ನುವ ಅವರ ಕೃತಿಯಲ್ಲಿ ಅಂದಿನ ದಿನಮಾನದ ನೈಜ ಚಿತ್ರಣವಿದೆ. ಬಳಸಿರುವ ಭಾಷೆ, ಮತ್ತು ನಿರೂಪಣಾ ಶೈಲಿಗಳಿಂದಾಗಿ ರಾಮರಾಯರು ಎಲ್ಲ ತಲೆಮಾರಿನ ಓದುಗರಿಗೂ ಪ್ರಿಯರಾಗುತ್ತಾರೆ.  





Comments